ಹೈದರಾಬಾದ್ ಮೆಟ್ರೊ ರೈಲು ಹೈದರಾಬಾದ್ ನಗರದ ಸಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೊಂದು. ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ರಪಂಚದಲ್ಲೇ ಅತಿ ಹೆಚ್ಚು ವೆಚ್ಚದ ಮೆಟ್ರೋ ರೈಲು ಇದಾಗಿದೆ. ಮೊದಲನೇ ಹಂತದಲ್ಲಿ ೩ ಹಾದಿಗಳಲ್ಲಿ ೭೧ ಕಿಲೋಮೀಟರಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ನಾಗೋಲಿನಿಂದ ಮೆಟ್ಟುಗುಡ್ಡದ ೮ ಕಿಲೋಮೀಟರ್‍ ಮತ್ತು ಮಿಯಾಪುರದಿಂದ ಅಮೀರಪೇಟೆಯ ೧೨ ಕಿಲೋಮೀಟರಿನ ಸಾರಿಗೆ ವ್ಯವಸ್ಥೆ ಡಿಸೆಂಬರ ೨೦೧೪ರ ಒಳಗೆ ಪ್ರಾರಂಭಿಸಲು ಯೋಜಿಸಲಾಗಿದೆ. == ಇತಿಹಾಸ == ಮೊದಲನೇ ಹಂತವನ್ನು ಕೇಂದ್ರ ಸರ್ಕಾರ ಏಪ್ರಿಲ್ ೨೦೦೮ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಮಾಡಲು ಯೋಜಿಸಲಾಗಿತ್ತು. ಮೇಟಾಸ್ ಎಲ್ & ಟಿ == ಖರ್ಚು == ಅಂದಾಜು ವೆಚ್ಚ ೧೪,೧೩೨ ಕೋಟಿ ರೂಪಾಯಿಗಳು. ಕೇಂದ್ರ ಸರ್ಕಾರ ಶೇಕಡ ೧೦ ರಷ್ಟು ಭರಿಸಲಿದ್ದು ಉಳಿದ ಶೇಕಡ ೯೦ ರಷ್ಟನ್ನು ಎಲ್ & ಟಿ ಸಂಸ್ಥೆಯು ಭರಿಸಲಿದೆ. ಕಾಮಗಾರಿಯು ೩ನೇ ಮಾರ್ಚ್ ೨೦೧೧ ರಂದು ಪ್ರಾರಂಭಿಸಬೇಕಾಗಿದ್ದು ಒಂದು ವರ್ಷ ತಡವಾಗಿ ಪ್ರಾರಂಭವಾಗಿದ್ದರಿಂದ ೧,೮೨೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಬಡ್ಡಿ ದರ ಈ ಯೋಜನೆಗೆ ಸೇರ್ಪಡೆಯಾಗಿ ಪ್ರಸ್ತುತ ಖರ್ಚು ವೆಚ್ಚ (ಮಾರ್ಚ್ ೨೦೧೨ ರಂತೆ) ೧೫,೯೫೭ ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿದೆ. == ನಿರ್ಮಾಣ == ಹಂತ ೧ ಹಂತ ೨ == ದರ == == ಹಾದಿಗಳು == === ಕೆಂಪು ಹಳಿ : ಮಿಯಾಪುರ – ಲಾಲ್‌ಬಹದ್ದೂರ್‍ ಶಾಸ್ತ್ರಿ ನಗರ === ಹಳಿಯ ಉದ್ದ - ೨೯.೮೭ ಕಿಲೋಮೀಟರ್‍ ನಿಲ್ದಾಣಗಳ ಸಂಖ್ಯೆ - ೨೭ (ಮಹಡಿಯಲ್ಲಿ) ಇತರೆ ಹಾದಿಗಳೊಂದಿಗೆ ಸಂಪರ್ಕ: ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ === ನೀಲಿ ಹಳಿ: ನಾಗೋಲ್ – ರಾಯದುರ್ಗ === ಹಳಿಯ ಉದ್ದ - ೨೬.೫೧ ಕಿಲೋಮೀಟರ್‍ ನಿಲ್ದಾಣಗಳ ಸಂಖ್ಯೆ - ೨೩ (ಮಹಡಿಯಲ್ಲಿ) ಇತರೆ ಹಾದಿಗಳೊಂದಿಗೆ ಸಂಪರ್ಕ: ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ === ಹಸಿರು ಹಳಿ: ಜ್ಯೂಬ್ಲಿ ಬಸ್ ನಿಲ್ದಾಣ – ಫಲಕ್‌===ನುಮ === ಹಳಿಯ ಉದ್ದ - ೧೪.೭೮ ಕಿಲೋಮೀಟರ್‍ ನಿಲ್ದಾಣಗಳ ಸಂಖ್ಯೆ - ೧೬ (ಮಹಡಿಯಲ್ಲಿ) ಇತರೆ ಹಾದಿಗಳೊಂದಿಗೆ ಸಂಪರ್ಕ: ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ == ಆರು ಹಂತಗಳ ನಿರ್ಮಾಣ ಕಾರ್ಯಕ್ರಮ == ರೈಲಿನ ಹಳಿಗಳನ್ನು ಪೂರೈಸಲು ಫ್ರಾನ್ಸ್ ಮೂಲದ ಟಾಟಾ ಕೋರಸ್ ಸಂಸ್ಥೆಗೆ ಕಾಂಟ್ರಾಕ್ಟ್ ನೀಡಲಾಗಿದೆ == ಪ್ರಯಾಣ ದರ (೨೦೧೪) == == ಬಾಹ್ಯ ಕೊಂಡಿಗಳು == ಹೈದರಾಬಾದ್ ಮೆಟ್ರೋ ರೈಲಿನ ಅಧಿಕೃತ ಅಂತರಜಾಲ ತಾಣ 2013-01-27 ವೇಬ್ಯಾಕ್ ಮೆಷಿನ್ ನಲ್ಲಿ. == ಹಿರಿಮೆ == == ಉಲ್ಲೇಖಗಳು ==